LIC HFLನಲ್ಲಿ ಬಂಪರ್ ನೇಮಕಾತಿ! ಈಗಲೇ ಅರ್ಜಿ ಹಾಕಿ!

Last updated on June 28th, 2025 at 08:50 pm

LIC HFL ನೇಮಕಾತಿ ಅರ್ಜಿ ಸಲ್ಲಿಸುವ ದಿನ ಮುಕ್ತಯವಾಗಿದೆ – Notification Expired

ಇತಿಚಿನ ನೇಮಕಾತಿಗಳು

ಭಾರತದ ಅತ್ಯಂತ ಪ್ರಸಿದ್ಧ ಹಣಕಾಸು ಸಂಸ್ಥೆಗಳಲ್ಲಿ ಒಂದಾದ LIC Housing Finance Limited (LIC HFL)ಇದೀಗ ಫ್ರೆಶರ್‌ಗಳಿಗೆ ಚಿಕ್ಕದು ಆದರೂ ಬಹುಮುಖ್ಯವಾದ ಉದ್ಯೋಗಾವಕಾಶವನ್ನು ನೀಡುತ್ತಿದೆ. ಇತ್ತೀಚೆಗೆ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಸಂಸ್ಥೆ ದೇಶದಾದ್ಯಂತ ಅಪ್ರೆಂಟೀಸ್ ಹುದ್ದೆಗಳ ನೇಮಕಾತಿಗಾಗಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಸ್ಪಷ್ಟವಾಗಿಯೂ ಹೇಳಬಹುದಾದ ವಿಷಯವೆಂದರೆ ಇದು ಪದವಿ ಪೂರ್ಣಗೊಳಿಸಿದ, ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಡಲು ನಿರೀಕ್ಷಿಸುತ್ತಿರುವ ಯುವಕರಿಗೆ ಅತ್ಯುತ್ತಮ ಅವಕಾಶವಾಗಿದೆ.

LIC Housing ನಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಮೂಲಕ, ಅಭ್ಯರ್ಥಿಗಳು ಹಣಕಾಸು ಕ್ಷೇತ್ರದ ನೈಜ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದ್ದು, ಭವಿಷ್ಯದಲ್ಲಿನ ಉದ್ಯೋಗ ಅವಕಾಶಗಳಿಗೆ ಉತ್ತಮ ಪೂರಕವಾಗುತ್ತದೆ. ಆಯ್ಕೆರಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹12,000 ವೇತನ ನೀಡಲಾಗುವುದು ಮತ್ತು ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಈ ಹುದ್ದೆಗಳ ವಿಶೇಷತೆಯೆಂದರೆ –ರಾಜ್ಯಾವಾರು ಹುದ್ದೆಗಳ ಹಂಚಿಕೆ, ಸ್ಪಷ್ಟ ಪರೀಕ್ಷಾ ಮಾದರಿ, ಕಡಿಮೆ ಅರ್ಜಿ ಶುಲ್ಕ ಹಾಗೂ ಸ್ಪರ್ಧಾತ್ಮಕ ಪ್ರಯೋಗಾತ್ಮಕ ಪರೀಕ್ಷೆಯೊಂದಿಗೆ ಚುಟುಕು ಆಯ್ಕೆ ಪ್ರಕ್ರಿಯೆ. ಕರ್ನಾಟಕದ ಅಭ್ಯರ್ಥಿಗಳಿಗೆ ಕೂಡ 36 ಹುದ್ದೆಗಳ ಅವಕಾಶ ಇದೆ, ಆದ್ದರಿಂದ ಅರ್ಜಿ ಹಾಕುವವರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ, ನೀವು ಇಂತಹ ಒಮ್ಮೆ-only ಅವಕಾಶವನ್ನು ಕಳೆದುಕೊಳ್ಳಬಾರದು. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ತಕ್ಷಣವೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಯನ್ನು ತುಂಬಾ ಸುಲಭವಾಗಿ ಸ್ಟೆಪ್ ಬೈ ಸ್ಟೆಪ್ ಫೋಟೋ ಜೊತೆಗೆ ಹೇಗೆ ಅರ್ಜಿ ಹಾಕುವುದು ಎಂಬ ಪೂರ್ತಿ ಮಾಹಿತಿಯನ್ನು ನೀಡಲಾಗಿದೆ. ಇದೆ ರೀತಿ ಸೆಂಟ್ರಲ್ ಅಂಡ್ ಸ್ಟೇಟ್ ಗವರ್ನಮೆಂಟ್ ಜಾಬ್ಸ್ ಅಪ್ಡೇಟೆಸ್ ಯಲ್ಲರಿಗಿಂತ ಮೊದಲು ನಿಮಗೆ ತಿಳಿಯಬೇಕೆಂದರೆ ಇಲ್ಲಿ ಕ್ಲಿಕ್ ಮಾಡಿ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ.ಹತಾವ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಕ್ಲಿಕ್ ಇಲ್ಲಿ ಕ್ಲಿಕ್ ಮಾಡಿ

 

ಇಲ್ಲಿ LIC HFL ಅಪ್ರೆಂಟೀಸ್ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಪಟ್ಟಿ ನೀಡಲಾಗಿದೆ. ಈ ಡೇಟುಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸಿ, ಯಾವುದೇ ಹಂತವನ್ನು ತಪ್ಪಿಸಿಕೊಳ್ಳಬೇಡಿ:

ಮುಖ್ಯ ದಿನಾಂಕಗಳು:

  • ಅರ್ಜಿ ಪ್ರಾರಂಭ ದಿನಾಂಕ: 13 ಜೂನ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನ: 28 ಜೂನ್ 2025
  • ಶುಲ್ಕ ಪಾವತಿ ಕೊನೆಯ ದಿನ: 30 ಜೂನ್ 2025
  • ಲಿಖಿತ ಪರೀಕ್ಷೆ ದಿನಾಂಕ: 03 ಜುಲೈ 2025
  • ಡಾಕ್ಯುಮೆಂಟ್ ಪರಿಶೀಲನೆ ಹಾಗೂ ಸಂದರ್ಶನ: 08 ರಿಂದ 09 ಜುಲೈ 2025
  • ಅಪ್ರೆಂಟೀಸ್ ತರಬೇತಿ ಪ್ರಾರಂಭ: 14 ಜುಲೈ 2025

ಹುದ್ದೆಗಳ ವಿವರ:

  • ಒಟ್ಟು ಹುದ್ದೆಗಳು: 250
  • ವಯೋಮಿತಿ (01 ಜೂನ್ 2025ಕ್ಕೆ ಅನುಸಾರ): ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ  

ಶೈಕ್ಷಣಿಕ ಅರ್ಹತೆ:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು
  • ಈಗಾಗಲೇ ಅಪ್ರೆಂಟೀಸ್ ಆಗಿ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಹರಲ್ಲ

 

LIC-HFL ಆಪ್ರೆಂಟಿಸ್ ನೇಮಕಾತಿ 2025

ಮೇಲ್ಕಂಡ ಅರ್ಹತೆಗಳಿಗೆ ತಕ್ಕ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಪೂರ್ಣ ವಿವರವಾಗಿ ಅಧ್ಯಯನ ಮಾಡಿ.

 

ರಾಜ್ಯ ಹುದ್ದೆಗಳ ಪಟ್ಟಿ (ಮುಖ್ಯ ರಾಜ್ಯಗಳು):

  • ಕರ್ನಾಟಕ: 36 ಹುದ್ದೆಗಳು
  • ತಮಿಳುನಾಡು: 36 ಹುದ್ದೆಗಳು
  • ಮಹಾರಾಷ್ಟ್ರ: 34 ಹುದ್ದೆಗಳು
  • ತೆಲಂಗಾಣ: 24 ಹುದ್ದೆಗಳು
  • ಆಂಧ್ರಪ್ರದೇಶ: 20 ಹುದ್ದೆಗಳು
  • ಉತ್ತರ ಪ್ರದೇಶ: 20 ಹುದ್ದೆಗಳು

 

ವೇತನ ಮತ್ತು ಲಾಭಗಳು:

  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತಿಂಗಳಿಗೆ ₹12,000 ವೇತನ ನೀಡಲಾಗುತ್ತದೆ
  • ಈ ವೇತನವು ಒಟ್ಟು 12 ತಿಂಗಳ ಕಾಲ ಲಭ್ಯವಿರುತ್ತದೆ
  • ಯಾವುದೇ TA/DA ಅಥವಾ HRA ನೀಡಲಾಗುವುದಿಲ್ಲ

 

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ (MCQ ಫಾರ್ಮಾಟ್ – 100 ಪ್ರಶ್ನೆಗಳು, 60 ನಿಮಿಷ):
    • ಬ್ಯಾಂಕಿಂಗ್, ವಿಮೆ, ಹೂಡಿಕೆ
    • ಗಣಿತ, ಲಾಜಿಕ್, ಇಂಗ್ಲಿಷ್
    • ಡಿಜಿಟಲ್ ಲಿಟರಸಿ ಮತ್ತು ಕಂಪ್ಯೂಟರ್ ಜ್ಞಾನ
  • ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸಂದರ್ಶನ

ಅರ್ಜಿ ಶುಲ್ಕ:

  • ಸಾಮಾನ್ಯ / OBC: ₹944
  • SC/ST / ಮಹಿಳೆಯರು: ₹708
  • PwBD (ವಿಕಲಚೇತನ ಅಭ್ಯರ್ಥಿಗಳು): ₹472

 

ಅರ್ಜಿ ಸಲ್ಲಿಸುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ

ಇಲ್ಲಿ ನೇಮಕಾತಿ 2025 ಗೆ ಅರ್ಜಿ ಹಾಕುವ ಪೂರ್ತಿಯಾಗಿ ನಿಖರವಾದ ಹಂತದಿಂದ ಹಂತದವರೆಗಿನ ವಿಧಾನವನ್ನು (step-by-step) ನೀಡಲಾಗಿದೆ  ಸಂಪೂರ್ಣ ಮಾಹಿತಿ ಅಧಿಕೃತ ವೆಬ್‌ಸೈಟ್ ಮತ್ತು NATS ಪೋರ್ಟಲ್ ಆಧಾರಿತವಾಗಿದೆ:

 

  • ಹಂತ 1: NATS ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ
    • ಮೊದಲು ಈ ಲಿಂಕ್‌ಗೆ ಹೋಗಿ[https://nats.education.gov.in](https://nats.education.gov.in)
    • “Student” ಆಯ್ಕೆ ಮಾಡಿ > “Enroll” ಮೇಲೆ ಕ್ಲಿಕ್ ಮಾಡಿ
    • ನಿಮ್ಮ ಪಠ್ಯವಿವರ (Degree), ಹೆಸರು, ಮೊಬೈಲ್ ನಂಬರ, ಇಮೇಲ್, ಪಾಸ್‌ವರ್ಡ್ ಇತ್ಯಾದಿ ಭರ್ತಿ ಮಾಡಿ
    • ನೋಂದಣಿ ಆದ ನಂತರ ನಿಮಗೆ ಒಂದು Enrolment ID ಸಿಗುತ್ತದೆ – ಇದನ್ನು ನೀವು ಮುಂದೆ ಬಳಸಬೇಕಾಗಿರುತ್ತದೆ
  • ಹಂತ 2: LIC HFL ನ ಅಧಿಕೃತ ವೆಬ್‌ಸೈಟ್ ಗೆ ಹೋಗಿ
    • ಈ ಲಿಂಕ್‌ಗೆ ಹೋಗಿ[https://www.lichousing.com](https://www.lichousing.com)
    • “Careers” ಅಥವಾ “Apprentice Recruitment” ವಿಭಾಗವನ್ನು ತೆರೆದು, ಅಧಿಕೃತ ಅಧಿಸೂಚನೆಯನ್ನು (notification) ಡೌನ್‌ಲೋಡ್ ಮಾಡಿ
    • ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಲಿಂಕ್ (Apply Online) ಇರುತ್ತದೆ ಅದರಲ್ಲಿ ಕ್ಲಿಕ್ ಮಾಡಿ
  • ಹಂತ 3: ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ
    • LIC HFL ಅರ್ಜಿ ಫಾರ್ಮ್‌ನಲ್ಲಿ ನಿಮ್ಮ NATS Enrolment ID ನ್ನು ನಮೂದಿಸಿ
    • ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ಜನ್ಮದಿನಾಂಕ, ವಿಳಾಸ), ಶಿಕ್ಷಣ ಮಾಹಿತಿ ಭರ್ತಿ ಮಾಡಿ
    • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ:
      • ಪಾಸ್‌ಪೋರ್ಟ್ ಸೈಸ್ ಫೋಟೋ
      • ಸೈನ್ ಸ್ಕ್ಯಾನ್ ಕಾಪಿ
      • ಪದವಿ ಪ್ರಮಾಣಪತ್ರ (Degree Certificate)
      • ಗುರುತಿನ ಕಾರ್ಡ್ (ಆಧಾರ್ / ಪಾನ್ / ಇತರ ID)
  • ಹಂತ 4: ಅರ್ಜಿ ಶುಲ್ಕ ಪಾವತಿಸಬೇಕು
    • ಅರ್ಜಿ ಸಲ್ಲಿಸಿದ ನಂತರ ನಿಮ್ಮ ಇಮೇಲ್ ಗೆBFSI SSC ವತಿಯಿಂದ([info@bfsissc.com](mailto:info@bfsissc.com)) ಒಂದು ಪಾವತಿ ಲಿಂಕ್ ಬರುತ್ತದೆ
    • ಅದರಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿ, ಅರ್ಜಿ ಶುಲ್ಕ ಪಾವತಿಸಬಹುದು
      • ಸಾಮಾನ್ಯ/OBC: ₹944
      • SC/ST/ಮಹಿಳೆ: ₹708
      • PwBD: ₹472
    • ಪಾವತಿ ಮಾಡುವುದು ಆನ್‌ಲೈನ್‌ನಲ್ಲಿ (UPI / Card / Net Banking) ಮೂಲಕ ಸಾಧ್ಯವಿದೆ
    • ಶುಲ್ಕ ಪಾವತಿಯ ಕೊನೆಯ ದಿನಾಂಕ: 30 ಜೂನ್ 2025
  • ಹಂತ 5: ಪರೀಕ್ಷೆಗೆ ಸಿದ್ಧರಾಗಿ
    • ಶುಲ್ಕ ಪಾವತಿಯ ನಂತರ, ನಿಮ್ಮ ಇಮೇಲ್ ಅಥವಾ ಮೊಬೈಲ್ ಗೆ ಪರೀಕ್ಷೆಯ ವಿವರಗಳು ಬರುತ್ತವೆ
    • ಪರೀಕ್ಷೆಯ ತಿದ್ದುಪಡಿ:
      • ದಿನಾಂಕ: 3 ಜುಲೈ 2025
      • ಮಾದರಿ: ಆನ್‌ಲೈನ್ ಪರೀಕ್ಷೆ (Remote Proctored Test)
      • ಪ್ರಶ್ನೆಗಳ ಸಂಖ್ಯೆ: 100 (MCQ)
      • ಸಮಯ: 60 ನಿಮಿಷ
      • ವಿಷಯಗಳು: ಬ್ಯಾಂಕಿಂಗ್, ಇನ್ವೆಸ್ಟ್‌ಮೆಂಟ್, ಇನ್ಶುರೆನ್ಸ್, ಅಂಕಗಣಿತ, ತರ್ಕ, ಇಂಗ್ಲಿಷ್, ಡಿಜಿಟಲ್ ಲಿಟರೆಸಿ

 

 

ಟಿಪ್ಪಣಿಗಳು

  • ಅರ್ಜಿ ಹಾಕಲು ಮೊಬೈಲ್‌ನಲ್ಲಿ chrome ಬ್ರೌಸರ್  ಬಳಸಬಹುದು, ಆದರೆ ಲ್ಯಾಪ್‌ಟಾಪ್ ಬಳಸಿದರೆ ಉತ್ತಮ
  • NATS ID ಇಲ್ಲದೆ LIC HFL ಅರ್ಜಿ ಹಾಕಲಾಗದು ಮೊದಲಿಗೆ ಅದು ಮಾಡಲೇ ಬೇಕು
  • ದಾಖಲೆಗಳು JPG/PDF ರೂಪದಲ್ಲಿ ಸಿದ್ಧವಾಗಿರಲಿ
  • ಇಮೇಲ್ ಸ್ಪಾಮ್ ಫೋಲ್ಡರ್ ಕೂಡ ಚೆಕ್ ಮಾಡಿರಿ – ಕೆಲವೊಮ್ಮೆ ಸೂಚನೆಗಳು ಅಲ್ಲಿ ಹೋಗುತ್ತವೆ

 

ಮುಖ್ಯ ಲಿಂಕ್ಸ್

ಪದೇಪದೇ ಕೇಳುವ ಪ್ರಶ್ನೆಗಳು(FAQ’s)

1.LIC HFL ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ ಅರ್ಹತೆ ಏನು?

ಉತ್ತರ:ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು. ಪದವಿ 01 ಜೂನ್ 2021 ರಿಂದ 01 ಜೂನ್ 2025 ನಡುವಣ ದಿನಾಂಕದಲ್ಲಿ ಪೂರ್ಣಗೊಂಡಿರಬೇಕು.

2.ಅರ್ಜಿ ಹಾಕಲು ಎಷ್ಟು ವಯಸ್ಸು ಇರಬೇಕು?

ಉತ್ತರ:ಅಭ್ಯರ್ಥಿಯು 01 ಜೂನ್ 2025 ರಂದು ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು. (ಜನನದ ದಿನಾಂಕ 02-06-2000 ರಿಂದ 01-06-2005 ನಡುವೆ ಇರಬೇಕು.)

3. LIC HFL ಅಪ್ರೆಂಟೀಸ್ ಪರೀಕ್ಷೆ ಯಾವ ಮಾದರಿಯಲ್ಲಿ ನಡೆಯುತ್ತದೆ?

ಉತ್ತರ:ಪರೀಕ್ಷೆ Online Remote Proctored Test ಆಗಿರುತ್ತದೆ.

  • ಸಮಯ:60 ನಿಮಿಷ
  • ಪ್ರಶ್ನೆಗಳು: 100 MCQs
  • ವಿಷಯಗಳು:
    • ಬ್ಯಾಂಕಿಂಗ್ & ಇನ್ಶುರೆನ್ಸ್
    • ಅಂಕಗಣಿತ & ಲಾಜಿಕ್
    • ಇಂಗ್ಲಿಷ್
    • ಡಿಜಿಟಲ್ ಲಿಟರೆಸಿ

4. ಸ್ಟೈಪೆಂಡ್ ಎಷ್ಟು ಸಿಗುತ್ತದೆ?

ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹12,000/- ಮಾಸಿಕ ಸ್ಟೈಪೆಂಡ್ ಒದಗಿಸಲಾಗುತ್ತದೆ. ಈ ಅಪ್ರೆಂಟೀಸ್ ಅವಧಿ 12 ತಿಂಗಳು ಇರುತ್ತದೆ.

5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: LIC HFL ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಜೂನ್ 2025 ಆಗಿದೆ.

 

ಪ್ರಮುಖ ಮಾಹಿತಿ

ಪ್ರೀತಿಯ ಸ್ನೇಹಿತರೆ, ನಾವು ನೀಡಿರುವ ಈ (ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ)ಇಲಾಖೆಯ ಉದ್ಯೋಗದ ಇನ್ಫಾರ್ಮಶನ್ ನಿಮಗೆ ಇಷ್ಟವಾಗ್ಗಿದರೆ ದಯವಿಟ್ಟು ಈ ಮಾಹಿತಿ ಓದಿದ ನಂತರ ಸುಮ್ಮನ್ನೆ ಇರಬೇಡಿ ಆದಷ್ಟು ಈ ಮಾಹಿತಿಯನ್ನ ಬೇರೆಯವರ ಜೊತೆ ಶೇರ್ ಮಾಡಿಕೊಳ್ಳಿ. ಇದೆ ರೀತಿ Karnataka Central Government Job, Karnataka government job ಮಾತು Karnataka government Shemes ಗಳ ಅಪ್ಡೇಟೆಸ್ ನಿಮಗೆ ಇಲ್ಲಿ ದಿನ ಸಿಗುತ್ತದೆ ಯಾವುದೇ ಒಂದು ಪೋಸ್ಟ್ ನಾ ಮಿಸ್ ಮಾಡಬೇಡಿ, ಯಾಕ್ ಎಂದರೆ ಯಾರಿಗ್ ಗೊತ್ತು ಯಾರಿಗೆ ಯಾವಾಗ ಯಾವ ಪೋಸ್ಟ್ ಸಿಗಬಹುದೊ ಅಲ್ವಾ, ಅದಕ್ಆಗಿ ಈ ಗ್ರೂಪ್ ಗಳನ್ನ ಜಾಯಿನ್ ಆಗಿ (ಟೆಲಿಗ್ರಾಂ ಗ್ರೂಪ್ ಜಾಯಿನ್ಹ ಆಗಲು ಕ್ಲಿಕ್ ಮಾಡಿ ಹತಾವ ವಾಟ್ಸಪ್ಪ್ ಗ್ರೂಪ್ ಜಾಯಿನ್ ಅಗಲ ಕ್ಲಿಕ್ ಮಾಡಿ)ಯಲರಿಗಿಂತ ಮೊಟ ಮೊದಲು ನಿಮಗೆ ನೋಟಿಫಿಕೇಷನ್ಸ್ ತಲುಪುತದೆ, ಹಾಗೂ ಈ ನೇಮಕಾತಿ ಇಷ್ಟ ಆದಲ್ಲಿ ನಿಮಗೆ ಬೇಕಾದ ಹಾಗೂ ಈ ವಿಷಯ ತಲುಪಬೇಕಾದ ಗೆಳೆಯನಿಗೆ ಶೇರ್ ಮಾಡಿ ಜೊತೆಗೆ ಫೇಸ್ಬುಕ್, ವಾಟ್ಸಪ್ಪ್ ಹಾಗೂ ಟೆಲಿಗ್ರಾಂ ಮೂಲಕ ಬೇಕಾದ ಉಪಯುಕ್ತ ಜನರಿಗೆ ಹಂಚಿಕೊಳ್ಳಿ,ಧನ್ಯವಾದಗಳು – ನಿಮ್ಮ ಉದ್ಯೋಗದ ಸಹಯಾತಿಯಾಗಿ ‘Taaja Suddi’ ಯಾವತ್ತೂ ನಿಮ್ಮೊಂದಿಗೆ ಇರುತ್ತದೆ!

Leave a Comment