Last updated on June 26th, 2025 at 10:41 pm
129 ಹುದ್ದೆಗಳ ನೇಮಕಾತಿ – ಕರ್ನಾಟಕ postal circle ಸರ್ಕಲ್: ಡಿಗ್ರಿ ಪಾಸ್ಗಳಿಗೆ ಭರ್ಜರಿ ಅವಕಾಶ!
ಕರ್ನಾಟಕ ಪೋಸ್ಟ್ ಆಫೀಸ್ ನಲ್ಲಿ ಸರ್ಕಾರಿ ಉದ್ಯೋಗದ ಅವಕಾಶ ಹುಡುಕುತ್ತಿದ್ದೀರಾ? ಇದೀಗ ನಿಮ್ಮ ಕನಸು ನನಸಾಗುವ ಅವಕಾಶ ಬಂದಿದೆ! ಕರ್ನಾಟಕ ಪೋಸ್ಟಲ್ ಸರ್ಕಲ್ ಕಡೆಯಿಂದ 129 Postal ಮತ್ತು Sorting Assistant ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ನೋಟಿಫಿಕೇಶನ್ ಬಿಡುಗಡೆಯಾಗಿದೆ.
ಈ ನೇಮಕಾತಿ ಡಿಗ್ರಿ ಪಾಸ್ ಮಾಡಿದ ಅರ್ಹ ಅಭ್ಯರ್ಥಿಗಳಿಗೆ ಅನೇಕ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತಿದೆ.LDCE (Limited Departmental Competitive Examination) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಮತ್ತು ಅರ್ಜಿಗಳ ತಪಾಸಣೆಯ ನಂತರ ಲಿಖಿತ ಪರೀಕ್ಷೆ ಹಾಗೂ ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ ನಡೆಯಲಿದೆ.
ಈ ಲೇಖನದಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು ಹುದ್ದೆಗಳ ವರ್ಗ, ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಖ್ಯ ದಿನಾಂಕಗಳ ವಿವರ. ಫೇಕ್ ವೆಬ್ಸೈಟ್ಗಳಿಂದ ಎಚ್ಚರ ಮತ್ತು ನಕಲಿ ಮಾಹಿತಿಗೆ ಮೋಸ ಹೋಗದಿರಿ, ಇಲ್ಲಿ ನೀಡಿರುವ ಎಲ್ಲ ಮಾಹಿತಿ ಮೂಲ ವೆಬ್ಸೈಟ್ ಆಧಾರಿತವಾಗಿದೆ.
ಮುಂದಿನ ಸರ್ಕಾರಿ ಉದ್ಯೋಗ ಅವಕಾಶ ಒಂದು ಕ್ಲಿಕ್ ಅಲ್ಲಿ ನಿಮಗೆ ಸಿಗುತ್ತದೆ! ಪ್ರತಿದಿನ ಹೊಸ ಹೊಸ ನಿಖರ ನೇಮಕಾತಿ ಮಾಹಿತಿ ನೇರವಾಗಿ ಮಾತು ವೇಗವಾಗಿ ನಿಮ್ಮ ಮೊಬೈಲ್ಗೆ ಪಡೆಯಲು, ಈಗಲೇ ನಮ್ಮ WhatsApp ಮತ್ತು Telegram ಗ್ರೂಪ್ ಗಳಿಗೆ ಜಾಯಿನ್ ಆಗಿ – ಅವಕಾಶ ತಪ್ಪಿಸಿಕೊಳ್ಳಬೇಡಿ.
ಕ್ಲಿಕ್ ಮಾಡಿ – Telegram ಗ್ರೂಪ್ಗೆ ಜಾಯಿನ್ ಆಗಿ(ಮೊಟ ಮೊದಲು ಮಾಹಿತಿ ಸಿಗೋದು ಇಲ್ಲೇ)
ಕ್ಲಿಕ್ ಮಾಡಿ – WhatsApp ಗ್ರೂಪ್ಗೆ ಜಾಯಿನ್ ಆಗಿ
ನೆಮಕಾತಿ ಇಲಾಖೆಯ ಹೆಸರು
ಕರ್ನಾಟಕ ಪೋಸ್ಟಲ್ ಸರ್ಕಲ್ (Karnataka Postal Circle)
ಹುದ್ದೆಗಳ ಹೆಸರು
ಪೋಸ್ಟಲ್ ಅಸಿಸ್ಟೆಂಟ್ (Postal Assistant) – ಪೋಸ್ಟ್ ಆಫೀಸ್, ಸರ್ಕಲ್ ಆಫೀಸ್ ಮಾತು ರಿಜಿನಲ್ ಆಫೀಸ್ನಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಯಾವುದಾದರು ಒಂದರಲ್ಲಿ ಕೆಲಸ ಮಾಡಬಹುದು.
ಸೋರ್ಟಿಂಗ್ ಅಸಿಸ್ಟೆಂಟ್ (Sorting Assistant) – ರೈಲ್ವೆ ಮೇಲ್ ಸರ್ವೀಸ್ (RMS) ಕೆಲಸವನ್ನ ಸೋರ್ಟಿಂಗ್ ಅಸಿಸ್ಟೆಂಟ್ ಆಗಿ ಮಾಡಬಹುದು.
ಒಟ್ಟು ಹುದ್ದೆಗಳ ಸಂಖ್ಯೆ
129 ಹುದ್ದೆಗಳು, ಅದರಲ್ಲಿ ಪೋಸ್ಟಲ್ ಅಸಿಸ್ಟೆಂಟ್ (ಪೋಸ್ಟ್ ಆಫೀಸ್)ಅಲ್ಲಿ 114 ಹುದ್ದೆಗಳು ಖಾಲಿ ಇದೆ ಮಾತು ಪೋಸ್ಟಲ್ ಅಸಿಸ್ಟೆಂಟ್ (ಸರ್ಕಲ್ ಹಾಗೂ ರಿಜಿನಲ್ ಆಫೀಸ್)ಅಲ್ಲಿ 5 ಹುದ್ದೆಗಳು ಖಾಲಿ ಇದೆ ಜೊತೆಗೆ ಸೋರ್ಟಿಂಗ್ ಅಸಿಸ್ಟೆಂಟ್ (ರೈಲ್ವೆ ಮೇಲ್ ಸರ್ವೀಸ್ – RMS)ಅಲ್ಲಿ 10 ಹುದ್ದೆಗಳು ಖಾಲಿ ಇದೆ.
ಉದ್ಯೋಗ ಸ್ಥಳ
ಕರ್ನಾಟಕ ರಾಜ್ಯದೊಳಗಿನ ವಿವಿಧ ಪೋಸ್ಟ್ ಆಫೀಸ್ಗಳು ಮತ್ತು ರೈಲ್ವೆ ಮೇಲ್ ಸರ್ವಿಸ್ (RMS) ಕಚೇರಿಗಳು.
ವೇತನ ಶ್ರೇಣಿ
ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ 2025ರ ಅಡಿಯಲ್ಲಿ ನೇಮಕವಾಗುವ ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸೋರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ ವೇತನ ಶ್ರೇಣಿ ಅನ್ನು 7ನೇ ವೇತನ ಆಯೋಗದ ಪ್ರಕಾರ ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನಮಾಲಾ ಲೆವಲ್ 4 ಅನ್ನು ಅನುಸರಿಸಿ ತಿಂಗಳಿಗೆ ₹25,500/- ರಿಂದ ₹81,100/- ರವರೆಗೆ ವೇತನ ನೀಡಲಾಗುತ್ತದೆ. ಜೊತೆಗೆ ಸರ್ಕಾರದ ನಿಯಮಾನುಸಾರ ವಿವಿಧ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ (HRA), ಯಾತಾಯಾತ ಭತ್ಯೆ (TA) ಮತ್ತು ಇತರಗಳನ್ನು ಸಹ ಪಡೆಯಬಹುದಾಗಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರೈಸಿರಬೇಕು.
ಈ ನೇಮಕಾತಿ Limited Departmental Competitive Examination (LDCE) ಮೂಲಕ ನಡೆಯುತ್ತಿದ್ದು, ಈ ಹುದ್ದೆಗಳಿಗೆ ಕೇವಲ ಈಗಾಗಲೇ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಮಾತ್ರ ಅರ್ಜಿ ಹಾಕಬಹುದಾಗಿದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01-01-2025 ರಂದು ಕನಿಷ್ಠ 20 ವರ್ಷದ ಮೇಲೆ ಮತ್ತು ಗರಿಷ್ಠ 40 ವರ್ಷ ವಯಸ್ಸಿನೊಳಗಿರಬೇಕು.ಈ ನೇಮಕಾತಿ Limited Departmental Competitive Examination (LDCE) ಮೂಲಕ ನಡೆಯುತ್ತಿರುವುದರಿಂದ, ವಯೋಮಿತಿ ಎಷ್ಟೇ ಇದ್ದರೂ, ಅಭ್ಯರ್ಥಿಗಳು ಈಗಾಗಲೇ ಅಂಚೆ ಇಲಾಖೆಯಲ್ಲಿ ಸೇವೆಲ್ಲುತ್ತಿರುವವರಾಗಿರಬೇಕು ಎಂಬುದು ಮುಖ್ಯ ಶರತ್ತು.
ಮುಖ್ಯ ಹೆಚ್ಚರಿಕೆ
ಎಚ್ಚರಿಕೆ – Taaja Suddi ವತಿಯಿಂದ “TaajaSuddi.Com” ವೆಬ್ಸೈಟ್ನಲ್ಲಿ ನೀಡುವ ಎಲ್ಲಾ ಸರ್ಕಾರಿ ಉದ್ಯೋಗ ಮಾಹಿತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.ನಾವು ಯಾವುದೇ ಹುದ್ದೆಗಳಿಗಾಗಿ ಹಣ ಪಾವತಿಸುವಂತೆ ಕೇಳುವುದಿಲ್ಲ ಮತ್ತು ಯಾವುದೇ ಅರ್ಜಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ನಮ್ಮ ವೆಬ್ಸೈಟ್ ಕರ್ನಾಟಕದ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ನಿಖರವಾದ ಹಾಗೂ ನಿತ್ಯ ಉಪಯುಕ್ತವಾದ ಉದ್ಯೋಗದ ಮಾಹಿತಿಯನ್ನು ಉಚಿತವಾಗಿ ನೀಡುತ್ತೆವೆ ಅಷ್ಟೇ ವರೆತು ಹಣ ತೆಗೆದುಕೊಂಡು ಮಾಹಿತಿ ನೀಡುವುದಿಲ್ಲ.
ದಯವಿಟ್ಟು ಎಚ್ಚರಿಕೆ ವಹಿಸಿ! ಯಾರಾದರೂ “Taaja Suddi” ಹೆಸರಿನಲ್ಲಿ ಅಥವಾ ನಮ್ಮ ಲೋಗೋ ಬಳಸಿಕೊಂಡು WhatsApp, Instagram ಅಥವಾ ಇತರೆ ಸೋಶಿಯಲ್ ಮೀಡಿಯಾ ಮೂಲಕ ಹಣ ಪಾವತಿಸುವಂತೆ ಹೇಳಿದರೆ – ಅದು ನಕಲಿ.ದಯವಿಟ್ಟು ಹಣ ಪಾವತಿಸಬೇಡಿ.
ಅಂತಹ ಯಾವುದೇ ದುರುಪಯೋಗದ ಕುರಿತು ನಮಗೆ ತಕ್ಷಣ ತಿಳಿಸಿ:ನಮ್ಮ ಅಧಿಕೃತ ಜಿ-ಮೇಲ್ ಅಲ್ಲಿ ತಕ್ಷಣ ಮೆಸೇಜ್ ಮಾಡಿ ತಿಳಿಸಿ. (Taaja suddi ಅಧಿಕೃತ ಜಿ-ಮೇಲ್)ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು, ದಯವಿಟ್ಟು ನಾವು ನೀಡಿರುವ ಇಲಾಖೆಯ ಅಧಿಕೃತ ನೋಟಿಫಿಕೇಶನ್ ಮಾತು ನಾವು ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನಂತರ ಮಾತ್ರ ಅರ್ಜಿ ಸಲ್ಲಿಸಿ ಏಕೆಂದರೆ ನಾವು ಇಲ್ಲಿ ಬರಿ ನಿಕರವಾದ ಮಾಹಿತಿಯನ್ನ ಮಾತ್ರ ನೀಡುತ್ತೆವೆ.
ವಯೋಮಿತಿಯಲ್ಲಿ ರಿಯಾಯಿತಿ
ಲಿಮಿಟೆಡ್ ಡಿಪಾರ್ಟ್ಮೆಂಟಲ್ ಕಾಂಪಿಟಿಟಿವ್ ಎಕ್ಸಾಮಿನೇಷನ್ (LDCE) ಮೂಲಕ ನಡೆಯುತ್ತಿರುವುದರಿಂದ, ಇದರಲ್ಲಿ ಅರ್ಜಿ ಸಲ್ಲಿಸುವವರು ಈಗಾಗಲೇ ಅಂಚೆ ಇಲಾಖೆಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಗಳಾಗಿರಬೇಕು. ಈ ನೇಮಕಾತಿ ಸಾರ್ವಜನಿಕ ಅಭ್ಯರ್ಥಿಗಳಿಗೆ ಅನ್ವಯವಾಗದೆ, ಕೇವಲ ಇಲಾಖೆಯೊಳಗಿನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದ್ದರಿಂದ, ಸಾಮಾನ್ಯ ಮೀಸಲಾತಿ ವರ್ಗಗಳಿಗೆ (SC/ST/OBC/PwD) ಪ್ರತ್ಯೇಕ ವಯೋಮಿತಿ ರಿಯಾಯಿತಿಯು ಈ ನೇಮಕಾತಿಗೆ ಅನ್ವಯವಾಗುವುದಿಲ್ಲ.
ಅರ್ಜಿ ಶುಲ್ಕ
ಈ LDCE ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅಂದರೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ.
ಆಯ್ಕೆ ವಿಧಾನ
ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ 2025 ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ. ಪ್ರಥಮ ಹಂತದಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ, ಇದರಲ್ಲಿ ಸಾಮಾನ್ಯ ಜ್ಞಾನ, ಭಾಷಾ ನಿಪುಣತೆ ಮತ್ತು ತಾಂತ್ರಿಕ ವಿಚಾರಗಳನ್ನು ಒಳಗೊಂಡ ಪ್ರಶ್ನೆಗಳು ಇರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಎರಡನೇ ಹಂತವಾಗಿ ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ (DEST) ನಡೆಸಲಾಗುತ್ತದೆ. ಈ ಎರಡೂ ಹಂತಗಳಲ್ಲಿ ಸಾಧನೆ ಆಧಾರಿತವಾಗಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಹಂತಗಳು
ಸ್ಟೆಪ್ 1-ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:
ಅರ್ಜಿ ಸಲ್ಲಿಸಲು, ಕರ್ನಾಟಕ ಪೋಸ್ಟ್ ಸರ್ಕಲ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಸ್ಟೆಪ್ 2-ಅಧಿಸೂಚನೆಯನ್ನು ಓದಿ:ಅರ್ಜಿ ಸಲ್ಲಿಸುವ ಮೊದಲು, ಅಧಿಕೃತ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಓದಿ.
ಸ್ಟೆಪ್ 3-ಅಧಿಕೃತ ವೆಬ್ಸೈಟ್ ಇಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ
ಸ್ಟೆಪ್ 4- ಪ್ರತಿ ಒಂದು ಮಾಹಿತಿಯನ್ನು ಸರಿಯಾಗಿ ಓದಿ ನಂತರ ಅರ್ಜಿ ಫಾರ್ಮ್ ಅನ್ನು ಸೂಕ್ತವಾಗಿ ಭರ್ತಿ ಮಾಡಿ ಫೀಲ್ ಮಾಡುವಾಗ ಯಾವುದೇ ತಪ್ಪುಗಳನ್ನ ಮಾಡಬೇಡಿ.
ಸ್ಟೆಪ್ 5- ಅರ್ಜಿ ಸಲ್ಲಿಸಿ:ಭರ್ತಿಯಾದ ಅರ್ಜಿ ಫಾರ್ಮ್ ಅನ್ನು ಅಧಿಕೃತ ವಿಳಾಸಕ್ಕೆ ಸಲ್ಲಿಸಿ.
ಸ್ಟೆಪ್ 6-ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-07-2025 ಆಗಿದ್ದು, ಅರ್ಜಿ ಸ್ವೀಕೃತಿಗಾಗಿ ಕೊನೆಯ ದಿನಾಂಕ 07-07-2025 ಎಂದು ನಿಗದಿಯಾಗಿರುತ್ತದೆ.
ಸ್ಟೆಪ್ 7-ಅರ್ಜಿ ಶುಲ್ಕ:ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
ಸ್ಟೆಪ್ 8-ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ:
ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸ್ಥಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪರಿಶೀಲಿಸಿ.
ಸ್ಟೆಪ್ 9-ಅಧಿಕೃತ ಸಂಪರ್ಕ ಮಾಹಿತಿ:
ಯಾವುದೇ ಪ್ರಶ್ನೆಗಳಿಗೆ ಅಥವಾ ಸಹಾಯಕ್ಕಾಗಿ, ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡಿ ವಿವರಗಳನ್ನು ನೋಡಿ.
ಪ್ರಮುಖ ದಿನಾಂಕಗಳು
ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ 2025ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಹೀಗಿವೆ: ಅಧಿಕೃತ ಅಧಿಸೂಚನೆ ಪ್ರಕಾರ, ನೇಮಕಾತಿ ಘೋಷಣೆ 09-06-2025 ರಂದು ಪ್ರಕಟವಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 02-07-2025 ಆಗಿದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ 07-07-2025 ಮತ್ತು ಅರ್ಜಿ ಪರಿಶೀಲನೆ ಪೂರ್ಣಗೊಳ್ಳುವ ದಿನಾಂಕ 08-07-2025 ನಿಗದಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅಡ್ಮಿಟ್ ಕಾರ್ಡ್ 14-07-2025 ರಂದು ಬಿಡುಗಡೆಗೊಳ್ಳಲಿದೆ. ನಂತರ, ಪರೀಕ್ಷೆ ದಿನಾಂಕ 20-07-2025 ಆಗಿದೆ. ಈ ದಿನಾಂಕಗಳನ್ನು ಗಮನದಲ್ಲಿಟ್ಟು, ಎಲ್ಲಾ ಅರ್ಜಿ ಪ್ರಕ್ರಿಯೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾಗಿದೆ.
ಇತಿಚಿನ ನೇಮಕಾತಿ – ಸಿಬಿಐ ಆಪ್ರೆಂಟಿಸ್
ಪ್ರಮುಖ ಲಿಂಕ್ಗಳು
- ಕರ್ನಾಟಕ ಪೋಸ್ಟ್ ಸರ್ಕಲ್ ಅಧಿಕೃತ ವೆಬ್ಸೈಟ್
- ಭಾರತ ಪೋಸ್ಟ್ ಅಧಿಕೃತ ನೇಮಕಾತಿ ಪುಟ
- ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ ಅಧಿಕೃತ ಅಧಿಸೂಚನೆ (PDF)
- ದಿನನಿತ್ಯದ ಸರ್ಕಾರಿ ಕೆಲಸದ ಅಪ್ಡೇಟ್ಸ್ಗಾಗಿ ಟೆಲಿಗ್ರಾಮ್ ಗ್ರೂಪ್ ಸೇರಿ
- ಪ್ರತಿ ದಿನ ಹೊಸ ಸರ್ಕಾರಿ ಕೆಲಸದ ಮಾಹಿತಿ ಪಡೆಯಲು ವಾಟ್ಸಾಪ್ ಗುಂಪಿಗೆ ಸೇರಿ
FAQs – ಪದೇಪದೆ ಕೇಳಲಾಗುವ ಪ್ರಶ್ನೆಗಳು
1. ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿಗೆ ಅರ್ಜಿ ಹಾಕಲು ಅರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರೈಸಿರಬೇಕು ಹಾಗೂ ಈಗಾಗಲೇ ಅಂಚೆ ಇಲಾಖೆಯಲ್ಲಿ ನಿಯಮಿತ ಉದ್ಯೋಗಿಯಾಗಿರಬೇಕು (LDCE ನೇಮಕಾತಿ).
2. ಈ ನೇಮಕಾತಿಗೆ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಹಾಕಬಹುದಾ?
ಇಲ್ಲ. ಈ ನೇಮಕಾತಿ Limited Departmental Competitive Examination (LDCE) ಆಗಿದ್ದು, ಕೇವಲ ಅಂಚೆ ಇಲಾಖೆಯೊಳಗಿನ ಉದ್ಯೋಗಿಗಳಿಗೆ ಮಾತ್ರ ಲಭ್ಯ.
3. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿದೆಯೆ?
ಇಲ್ಲ. ಅರ್ಜಿ ಸಲ್ಲಿಕೆ ಪೂರ್ಣ ಉಚಿತವಾಗಿದೆ.
4. ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-07-2025 ಮತ್ತು ಅರ್ಜಿ ಸ್ವೀಕೃತಿಗಾಗಿ ಕೊನೆಯ ದಿನ 07-07-2025.
5. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ ಮತ್ತು ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ (DEST) ಎರಡರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ಮಾಹಿತಿ
ಪ್ರೀತಿಯ ಸ್ನೇಹಿತರೆ, ನಾವು ನೀಡಿರುವ ಈ (ಕರ್ನಾಟಕ ಪೋಸ್ಟ್ ಸರ್ಕಲ್ ನೇಮಕಾತಿ)ಇಲಾಖೆಯ ಉದ್ಯೋಗದ ಇನ್ಫಾರ್ಮಶನ್ ನಿಮಗೆ ಇಷ್ಟವಾಗ್ಗಿದರೆ ದಯವಿಟ್ಟು ಈ ಮಾಹಿತಿ ಓದಿದ ನಂತರ ಸುಮ್ಮನ್ನೆ ಇರಬೇಡಿ ಆದಷ್ಟು ಈ ಮಾಹಿತಿಯನ್ನ ಬೇರೆಯವರ ಜೊತೆ ಶೇರ್ ಮಾಡಿಕೊಳ್ಳಿ. ಇದೆ ರೀತಿ Karnataka Central Government Job, Karnataka government job ಮಾತು Karnataka government Shemes ಗಳ ಅಪ್ಡೇಟೆಸ್ ನಿಮಗೆ ಇಲ್ಲಿ ದಿನ ಸಿಗುತ್ತದೆ ಯಾವುದೇ ಒಂದು ಪೋಸ್ಟ್ ನಾ ಮಿಸ್ ಮಾಡಬೇಡಿ, ಯಾಕ್ ಎಂದರೆ ಯಾರಿಗ್ ಗೊತ್ತು ಯಾರಿಗೆ ಯಾವಾಗ ಯಾವ ಪೋಸ್ಟ್ ಸಿಗಬಹುದೊ ಅಲ್ವಾ, ಅದಕ್ಆಗಿ ಈ ಗ್ರೂಪ್ ಗಳನ್ನ ಜಾಯಿನ್ ಆಗಿ (ಟೆಲಿಗ್ರಾಂ ಗ್ರೂಪ್ ಜಾಯಿನ್ಹ ಆಗಲು ಕ್ಲಿಕ್ ಮಾಡಿ ಹತಾವ ವಾಟ್ಸಪ್ಪ್ ಗ್ರೂಪ್ ಜಾಯಿನ್ ಅಗಲ ಕ್ಲಿಕ್ ಮಾಡಿ)ಯಲರಿಗಿಂತ ಮೊಟ ಮೊದಲು ನಿಮಗೆ ನೋಟಿಫಿಕೇಷನ್ಸ್ ತಲುಪುತದೆ, ಹಾಗೂ ಈ ನೇಮಕಾತಿ ಇಷ್ಟ ಆದಲ್ಲಿ ನಿಮಗೆ ಬೇಕಾದ ಹಾಗೂ ಈ ವಿಷಯ ತಲುಪಬೇಕಾದ ಗೆಳೆಯನಿಗೆ ಶೇರ್ ಮಾಡಿ ಜೊತೆಗೆ ಫೇಸ್ಬುಕ್, ವಾಟ್ಸಪ್ಪ್ ಹಾಗೂ ಟೆಲಿಗ್ರಾಂ ಮೂಲಕ ಬೇಕಾದ ಉಪಯುಕ್ತ ಜನರಿಗೆ ಹಂಚಿಕೊಳ್ಳಿ,ಧನ್ಯವಾದಗಳು – ನಿಮ್ಮ ಉದ್ಯೋಗದ ಸಹಯಾತಿಯಾಗಿ ‘Taaja Suddi’ ಯಾವತ್ತೂ ನಿಮ್ಮೊಂದಿಗೆ ಇರುತ್ತದೆ!
ಲೇಖಕ: ದೀಪು – ಜನರ ನಂಬಿಕೆಗೆ ಹೆಸರಾಗಿರುವ ಹೆಸರು.
ದೀಪು ಅವರು Taaja Suddi ಎಂಬ ನಂಬಿಗೆಯ ಪೋರ್ಟಲ್ನ ಸ್ಥಾಪಕರು. ಇವರು ಕರ್ನಾಟಕದ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಯನ್ನು ಪ್ರತಿ ದಿನ ನೀಡುವಲ್ಲಿ ಜನರಲ್ಲಿ ಬಹುದೊಡ್ಡ ನಂಬಿಕೆಗೆ ಪಾತ್ರರಾಗಿದ್ದಾರೆ. ಯಾವ ಪೋಸ್ಟ್ ಅನ್ನು ನೋಡಿದರೂ ನೈಜ ಮಾಹಿತಿಯಷ್ಟೆ, ಯಾವುದೇ ಫೇಕ್ ವೆಬ್ಸೈಟ್ ಲಿಂಕ್ಗಳು ಅಥವಾ ಗೊಂದಲ ಹುಟ್ಟಿಸುವ ವಿಷಯಗಳಿಲ್ಲ. ಅಪ್ಲಿಕೇಶನ್ ಲಿಂಕ್, ಅರ್ಹತೆ, ವೇತನ, ಅಂತಿಮ ದಿನಾಂಕ — ಎಲ್ಲವನ್ನೂ ಸರಳ ಮತ್ತು ಸ್ಪಷ್ಟ ಕನ್ನಡದಲ್ಲಿ ನೀಡಲಾಗುತ್ತದೆ.
ಬಹುತೇಕ ಯುವಕರು ಇವರೆತ್ತ ತಲೆಯೆತ್ತಿ ಹೇಳೋದು ಒಂದೇ – “ನಿಜವಾದ ಸರ್ಕಾರಿ ಉದ್ಯೋಗದ ಮಾಹಿತಿ ಬೇಕಾದ್ರೆ Taaja Suddi ನೋಡೋದು ನಿಜ.” ದೀಪು ಅವರು ತಮ್ಮ ಲೇಖನಗಳ ಮೂಲಕ ಯಾವುದೇ ಪ್ರಚಾರವಿಲ್ಲದೆ, ಯಾವುದೇ ಮೋಸದ ನಂಟಿಲ್ಲದೆ ಶುದ್ಧ ಸೇವಾ ಮನೋಭಾವದಿಂದ ಈ ಮಾಹಿತಿ ತಲುಪಿಸುತ್ತಿದ್ದಾರೆ. ಅವರ ಗುರಿ ಸರಳ – ಉದ್ಯೋಗ ಹುಡುಕುವ ಪ್ರತಿಯೊಬ್ಬ ಕನ್ನಡಿಗರಿಗೂ ನಂಬಬಹುದಾದ ಹಾಗೂ ನೇರವಾಗಿ ಅರ್ಜಿ ಹಾಕಬಹುದಾದ ಆಧಿಕೃತ ಮಾಹಿತಿ ತಲುಪಿಸಬೇಕು.
ಇವರು ನೀಡುವ ಮಾಹಿತಿ ಪತ್ರಿಕೆಯಂತಲ್ಲ, ಇದು ಹಳ್ಳಿಯಿಂದ ನಗರವರೆಗೆ ಯುವಕರ ಭವಿಷ್ಯ ರೂಪಿಸೋ ಹೊತ್ತೆದೆಯಾದ ಶುದ್ಧ ಕೆಲಸ. ಇಂತಹ ನೈಜ ಮಾಹಿತಿ ನೀಡುವ ವ್ಯಕ್ತಿ ನಮಗೆ ದೊರೆತಿದ್ದು ನಮ್ಮ ಪಾಲಿಗೆ ಅದೃಷ್ಟ.