DRDO RAC Scientist B Recruitment 2025: ₹88,000+ ವೇತನ ಇರುವ ಕೇಂದ್ರ ಸರ್ಕಾರದ ಉದ್ಯೋಗ ಅವಕಾಶ

Last updated on July 9th, 2025 at 02:30 pm

DRDO RAC Scientist B Recruitment 2025DRDO RAC Scientist B Recruitment 2025: ₹88,000+ ವೇತನ ಇರುವ ಕೇಂದ್ರ ಸರ್ಕಾರದ ಉದ್ಯೋಗ ಅವಕಾಶ

ಭಾರತದ ಅತ್ಯುನ್ನತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ DRDO ಇದೀಗ ತಮ್ಮದಾಗಿರುವ RAC (Recruitment and Assessment Centre) ಮೂಲಕ ಹೊಸ ನೇಮಕಾತಿ ಪ್ರಕಟಿಸಿದೆ. DRDO RAC Scientist B Recruitment 2025 ನಡೇರುತ್ತಿದ್ದು, ಭಾರತಾದ್ಯಾಂತ 204 ವಿಜ್ಞಾನಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದೆ.

ಈ ಹುದ್ದೆಗಳು GATE Score ಆಧಾರಿತವಾಗಿದ್ದು, BE/B.Tech ಅಥವಾ M.Sc ಇದ್ದವರು ಈ ಉದ್ಯೋಗಕ್ಕಾಗಿ ಅರ್ಜಿ ಹಾಕಬಹುದು. DRDO ರಂತಹ ಹೆಮ್ಮೆಯ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಈಗ ನಿಮ್ಮ ಮುಂದಿದೆ  ವೇತನವೂ ₹88,000+!

ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡ, ಹಾಗೂ ಅರ್ಜಿ ಸಲ್ಲಿಸುವ ಪೂರ್ಣ ವಿವರಗಳನ್ನು ಈ ಪೋಸ್ಟ್‌ನಲ್ಲಿ ತಿಳಿದುಕೊಳ್ಳಿ. ಫೇಕ್ ವೆಬ್ಸೈಟ್ಸ್ ಗಳಿಂಧ ಮೋಸ ಹೋಗಬೇಡಿ – ಸರಿ ಮಾಹಿತಿಯನ್ನು ಇಲ್ಲಿ ಪಡೆಯಿರಿ!

ನೇಮಕಾತಿ ಇಲಾಖೆಯ ಹೆಸರು (Recruiting Department Name)

ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ (RAC), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ರಕ್ಷಣಾ ಸಚಿವಾಲಯ

Recruitment & Assessment Centre (RAC), Defence Research & Development Organisation (DRDO), Ministry of Defence

ಹುದ್ದೆಗಳ ಹೆಸರು (Post Names)

ಈ ನೇಮಕಾತಿಯಲ್ಲಿ ವಿವಿಧ ಸಂಸ್ಥೆಗಳಲ್ಲಿ Scientist ‘B’ ಹುದ್ದೆಗಳ ಭರ್ತಿ ನಡೆಯಲಿದೆ. ಮುಖ್ಯವಾಗಿ DRDO ಸಂಸ್ಥೆಯಲ್ಲಿ Scientist ‘B’ ಹುದ್ದೆಗಳಿವೆ. ಜೊತೆಗೆ, ವಿಮಾನಾಭಿವೃದ್ಧಿ ಸಂಸ್ಥೆ (ADA) ಯಲ್ಲೂ Scientist/Engineer ‘B’ ಹುದ್ದೆಗಳಿವೆ.

ಇದಲ್ಲದೆ, ಆಯುಧ ಮತ್ತು ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ಇಂಜಿನಿಯರಿಂಗ್ ಸ್ಥಾಪನೆ (WESEE), ಸೇನಾ ಎಂಜಿನಿಯರಿಂಗ್ ಕಾಲೇಜು (CME), ಸಶಸ್ತ್ರ ಪಡೆಯ ವೈದ್ಯಕೀಯ ಕಾಲೇಜು (AFMC) ಮತ್ತು ಆಯ್ದ ಆಯ್ಕೆ ಕೇಂದ್ರಗಳಲ್ಲಿ (SCN/SCC/SCS) Encadred Scientist ‘B’ ಹುದ್ದೆಗಳೂ ಈ ನೇಮಕಾತಿಯಲ್ಲಿ ಸೇರಿವೆ.

ಒಟ್ಟು ಹುದ್ದೆಗಳ ಸಂಖ್ಯೆ (Number Of Posts)

ಈ ನೇಮಕಾತಿಯಡಿ ಒಟ್ಟು 204 ಹುದ್ದೆಗಳ ಭರ್ತಿ ನಡೆಯಲಿದೆ. ಇದರಲ್ಲಿ DRDOನಲ್ಲಿ 150 Scientist ‘B’ ಹುದ್ದೆಗಳಿದ್ದು, ADAದಲ್ಲಿ 10 Scientist/Engineer ‘B’ ಹುದ್ದೆಗಳಿವೆ. ಮಿಕ್ಕ 44 ಹುದ್ದೆಗಳು ವಿವಿಧ ರಕ್ಷಣಾ ಸಂಬಂಧಿತ ಸಂಸ್ಥೆಗಳು ಮತ್ತು ಆಯ್ದ ಕೇಂದ್ರಗಳಲ್ಲಿ Encadred Scientist ‘B’ ಆಗಿವೆ. ಎಲ್ಲಾ ಹುದ್ದೆಗಳ ಆಯ್ಕೆ GATE ಅಂಕೆಗಳ ಆಧಾರದಲ್ಲಿಯೇ ನಡೆಯಲಿದೆ.

ಉದ್ಯೋಗ ಸ್ಥಳ (Job Location)

ಈ ನೇಮಕಾತಿಯಡಿಯಲ್ಲಿ ಹುದ್ದೆಗಳ ಸ್ಥಳಗಳು ಭಾರತಾದ್ಯಾಂತ ವಿಭಿನ್ನ ಪಟ್ಟಣಗಳಲ್ಲಿ ವಿಸ್ತರಿಸಿರುವಂತೆ ಇವೆ. ಮುಖ್ಯವಾಗಿ DRDO ಇಲಾಖೆಗೆ ಸೇರಿರುವ ಲ್ಯಾಬ್‌ಗಳು ಮತ್ತು ಯೋಜನೆ ಕಚೇರಿಗಳು ಇಡೀ ದೇಶದಾದ್ಯಂತ ಇದ್ದು, ಅಭ್ಯರ್ಥಿಗಳಿಗೆ ಪ್ಯಾನ್–ಇಂಡಿಯಾ‌ ಲೆವೆಲ್‌ನ ಕೆಲಸದ ಸ್ಥಳಗಳು ಇರುತ್ತವೆ.

ಕೆಲವು ಪ್ರಮುಖ ಹುದ್ದೆಗಳು ADA  Bengaluru, WESEE  Delhi, CME ಮತ್ತು AFMC  Pune, ಹಾಗು SCN/SCC/SCS  Jalandhar, Bhopal ಮುಂತಾದ ಆಯ್ಕೆ ಕೇಂದ್ರಗಳಲ್ಲಿ ಇರುತ್ತವೆ. ಅಭ್ಯರ್ಥಿಗಳು ನೇಮಕವಾದ ನಂತರ DRDOಯ ವಿವಿಧ ಘಟಕಗಳಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆ ಇರುತ್ತದೆ.

ವೇತನ ಶ್ರೇಣಿ(Salary Deatiles)

DRDO RAC Scientist ‘B’ ಹುದ್ದೆಗೆ 7ನೇ ವೇತನ ಆಯೋಗದಂತೆ Level‑10 ಪೇ ಮ್ಯಾಟ್ರಿಕ್ಸ್ ಅನ್ವಯಿಸುತ್ತದೆ. ಈ ಹುದ್ದೆಗೆ ಪ್ರಾರಂಭಿಕ ಬ್ಯಾಂಸಿಕ್ ವೇತನ ₹56,100/- ಆಗಿದ್ದು, ಇದಕ್ಕೆ ಹೆಚ್ಚುವರಿ ಭತ್ಯೆಗಳಾದ ಡಿಎ (Dearness Allowance), ಟಿಎ (Transport Allowance), ಮತ್ತು HRA ಸೇರಿ ಪ್ರತಿ ತಿಂಗಳು ಸುಮಾರು ₹1,00,000/- ರಷ್ಟು ಒಟ್ಟು ಸಂಬಳ ಲಭ್ಯವಿರುತ್ತದೆ.

ಸರ್ಕಾರಿ ವಸತಿ ಸಿಗದಿದ್ದರೆ HRA ನೀಡಲಾಗುತ್ತದೆ. ಜೊತೆಗೆ Leave Travel Concession, ವೈದ್ಯಕೀಯ ಸೌಲಭ್ಯ, ಗ್ರೂಪ್ ಇನ್ಸೂರೆನ್ಸ್ ಮತ್ತು Professional Update Allowance ಕೂಡ ದೊರೆಯುತ್ತದೆ. ಎಲ್ಲಾ ಕಡಿತಗಳ ನಂತರ, ಕೈಗೆ ಸಿಗುವ ವೇತನ ಸುಮಾರು ₹68,000/- ರಿಂದ ₹85,000/- ರವರೆಗೆ ಇರಬಹುದಾಗಿದೆ.

ಶೈಕ್ಷಣಿಕ ಹರಹತೆ (Educational Qualification)

DRDO RAC Scientist B Recruitment 2025 ಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/B.Tech ಅಥವಾ M.Sc ಪದವಿ ಹೊಂದಿರಬೇಕು. ಈ ಪದವಿಯನ್ನು ಸಂಬಂಧಿತ ವಿಭಾಗದಲ್ಲಿ ಪ್ರಥಮ ದರ್ಜೆ (First Class) ನಲ್ಲಿ ಉತ್ತೀರ್ಣರಾಗಿರುವುದು ಅವಶ್ಯಕ.

ಜೊತೆಗೆ ಅಭ್ಯರ್ಥಿಗಳಿಗೆ GATE Score ಇದ್ದೇ ಇರಬೇಕು, ಏಕೆಂದರೆ ಈ ನೇಮಕಾತಿಯು GATE ಅಂಕಗಳ ಆಧಾರದಲ್ಲಿ ನಡೆಯುತ್ತದೆ. ಆಯಾ ಹುದ್ದೆಗೆ ಅನುಗುಣವಾಗಿ Electronics, Mechanical, Computer Science, Electrical, Civil, Aerospace, Instrumentation, Chemical Engineering, Physics, Chemistry, Mathematics ಮತ್ತು Psychology ಇತ್ಯಾದಿ ವಿಭಾಗಗಳಲ್ಲಿ ವಿದ್ಯಾರ್ಹತೆ ಅಗತ್ಯವಿದೆ.

ಅರ್ಜಿ ಹಾಕುವ ಮೊದಲು DRDO RAC Scientist B Recruitment 2025 ನ ಅಧಿಕೃತ ನೋಟಿಫಿಕೇಶನ್‌ ಅನ್ನು ಓದಿ, ಯಾವುದೇ ಹುದ್ದೆಗೆ ಬೇಕಾದ ಖಚಿತ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ.

ವಯೋಮಿತಿ (Age Limit)

DRDO RAC Scientist B Recruitment 2025 ಗೆ ಅರ್ಜಿ ಹಾಕುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಸಾಮಾನ್ಯ (UR) ಮತ್ತು ಆರ್ಥಿಕವಾಗಿ ನಷ್ಟದಲ್ಲಿರುವ ವರ್ಗದ (EWS) ಅಭ್ಯರ್ಥಿಗಳಿಗೆ 35 ವರ್ಷ ಇರಬೇಕು. ಇತರೆ ಹಿಂದುಳಿದ ವರ್ಗದ (OBC  ನಾನ್ ಕ್ರೀಮಿ ಲೆಯರ್) ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ಅನ್ವಯವಾಗುತ್ತದೆ.

ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ, ಕೇಂದ್ರ ಸರ್ಕಾರದ ನೌಕರರಿಗೆ ಐದು ವರ್ಷಗಳ, ಮತ್ತು ಮಾಜಿ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ರಿಯಾಯಿತಿ ಲಭ್ಯವಿದೆ. ಎಲ್ಲಾ ವಯೋಮಿತಿಯ ಲೆಕ್ಕಾಚಾರಕ್ಕಾಗಿ ಜುಲೈ 4, 2025 ಅನ್ನು ಆಧಾರ ದಿನಾಂಕವಾಗಿ ಪರಿಗಣಿಸಲಾಗುತ್ತದೆ.

ವಯೋಮಿತಿ ರಿಯಾಯಿತಿ (Age Relaxation)

DRDO RAC Scientist B Recruitment 2025 ಹುದ್ದೆಗಳಿಗೆ ವಯೋಮಿತಿ ಸಂಬಂಧಿತ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ 5 ವರ್ಷಗಳ, ಹಾಗೂ ಇತರೆ ಹಿಂದುಳಿದ ವರ್ಗದ (OBC – ನಾನ್ ಕ್ರೀಮಿ ಲೆಯರ್) ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಲಭ್ಯವಿದೆ.

ಅಂಗವಿಕಲ (PwD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ನೌಕರರಿಗೆ 5 ವರ್ಷಗಳ, ಮತ್ತು ಮಾಜಿ ಸೈನಿಕರಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ಹೆಚ್ಚುವರಿ ರಿಯಾಯಿತಿಗಳು ಅನ್ವಯಿಸುತ್ತವೆ. ಈ ಎಲ್ಲ ರಿಯಾಯಿತಿಗಳು ಮಾನ್ಯ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ.

ಎಚ್ಚರಿಕೆ(Alert)

ಎಚ್ಚರಿಕೆ: Taaja Suddi ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ!

Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ ಹಾಗೂ ಯೋಜನೆಗಳ ಮಾಹಿತಿಗಳು ಸಂಪೂರ್ಣ ಉಚಿತ.ನಾವು ಯಾವತ್ತೂ ಹಣ ಕೇಳುವುದಿಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಅರ್ಜಿ ಹಾಕಿದವರಿಗೆ ಒಂದು ರೂಪಾಯಿಯೂ ಕೇಳಲಾಗುವುದಿಲ್ಲ.
ಎಚ್ಚರ! ಯಾರಾದರೂ ನಮ್ಮ ಹೆಸರು ಅಥವಾ ಲೋಗೋ ಬಳಸಿ WhatsApp, Telegram, Instagram ನಲ್ಲಿ ಹಣ ಕೇಳುತ್ತಿದ್ದರೆ – ಅದು ನಕಲಿ.ಅವರು ನಿಮ್ಮ ಭವಿಷ್ಯವನ್ನು ಲೂಟಿ ಮಾಡ್ತಿದ್ದಾರೆ ನಂಬಬೇಡಿ.
ಹಣ ಕೇಳಿದರೆ – ತಕ್ಷಣ ತಳ್ಳಿ ಬಿಡಿ. ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail ಗೆ ಸಂಪರ್ಕಿಸಿ.

Taaja Suddi ಎಂದರೆ:
•100%ನಿಖರವಾದ ಮತ್ತು ಸರಳ ಮಾಹಿತಿ
•ಯಾವುದೇ ವಂಚನೆಯಿಲ್ಲ
•ಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
•100% ಉಚಿತ ಸೇವೆ

ಹೆಚ್ಚಾಗಿ ತಿಳಿದು, ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ. ಮೊದಲು ಓದಿ, ಆಮೇಲೆ ಅರ್ಜಿ ಹಾಕಿ.

ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್‌ಗೆ ಈಗಲೇ ಸೇರಿ – ಪ್ರತಿ ದಿನ ಹೊಸ ಸರ್ಕಾರಿ ಉದ್ಯೋಗ ಹಾಗೂ ಯೋಜನೆಗಳ ಮಾಹಿತಿ ನಿಮಗೆ ಮೊಟ ಮೊದಲು ತಲುಪುತದೆ ಕೆಳಗೆ ಕ್ಲಿಕ್ ಮಾಡಿ ಸೇರಿಕೊಳ್ಳಿ.

DRDO RAC Scientist B Recruitment 2025

ಅರ್ಜಿ ಶುಲ್ಕ (Application Fee)

DRDO RAC Scientist B Recruitment 2025 ಗೆ ಅರ್ಜಿ ಹಾಕುವ ಸಾಮಾನ್ಯ ವರ್ಗ (UR), ಆರ್ಥಿಕವಾಗಿ ನಷ್ಟದಲ್ಲಿರುವ ವರ್ಗ (EWS) ಮತ್ತು ಇತರೆ ಹಿಂದುಳಿದ ವರ್ಗದ (OBC) ಪುರುಷ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಆದರೆ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಂಗವಿಕಲ ಅಭ್ಯರ್ಥಿಗಳು (PwD) ಮತ್ತು ಎಲ್ಲಾ ವರ್ಗಗಳ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಶುಲ್ಕದಿಂದ ಸಂಪೂರ್ಣ ಮುಕ್ತವಿದೆ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ ಮತ್ತು ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಶುಲ್ಕ ಪಾವತಿ ಮುಗಿಸುವುದು ಅನಿವಾರ್ಯ.

ಆಯ್ಕೆ ವಿಧಾನ (Selection Process)

DRDO RAC Scientist B Recruitment 2025 ಹುದ್ದೆಗಳಿಗೆ ಅಭ್ಯರ್ಥಿಗಳನ್ನು GATE ಅಂಕಗಳ ಆಧಾರದಲ್ಲಿ ಮೊದಲು 1:10 ಅನುಪಾತದಲ್ಲಿ ಪ್ರಮಾಣಾನುಪಾತವಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ . ಆನಂತರ, ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ದೆಹಲಿ ಅಥವಾ ನಿರ್ಧರಿಸಿದ ಸ್ಥಳಗಳಲ್ಲಿ ವೈಯಕ್ತಿಕ ಸಂದರ್ಶನ (Personal Interview) ಗೆ ಆಹ್ವಾನಿಸಲಾಗುತ್ತದೆ .

ಅಂತಿಮ ಆಯ್ಕೆ ಮಾಡಲು GATE ಅಂಕಗಳಿಗೆ 80% + ಸಂದರ್ಶನ ಅಂಕಗಳಿಗೆ 20% ಎಂದು ಮೆರೆದಿಕ್ ಮೇಲೆ ಪ್ರತಿ ವಿಭಾಗ‑ಪ್ರತಿ ವರ್ಗಕ್ಕೆ ಮಿಶ್ರಣ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ . ಅರ್ಜಿ ಸಲ್ಲಿಸುವ ಮೊದಲು ಅಧಿಕೃತ Notification ಓದಿ ಖಚಿತವಾಗಿ ಈ selection process ಅರ್ಥಮಾಡಿಕೊಳ್ಳಿ.

ಅರ್ಜಿಯ ವಿಧಾನ (How to Apply)

DRDO RAC Scientist B Recruitment 2025 ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೊದಲು DRDO RAC ನ ಅಧಿಕೃತ ವೆಬ್‌ಸೈಟ್  rac.gov.in ಗೆ ಭೇಟಿ ನೀಡಬೇಕು. ಆ ವೆಬ್‌ಸೈಟ್‌ನಲ್ಲಿ ಹೊಸದಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಬಳಿಕ ಲಾಗಿನ್ ಆಗಿ ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ವಿವರಗಳನ್ನು ಸರಿಯಾಗಿ ನಮೂದಿಸಬೇಕು.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ GATE Scorecard, ವಿದ್ಯಾರ್ಹತಾ ಪ್ರಮಾಣಪತ್ರಗಳು, ಓದಿದ ಕಾಲೇಜು ಮಾನ್ಯತೆ ದಾಖಲೆಗಳು, ಹಾಗೂ ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡುವುದು ಕಡ್ಡಾಯ. ಅರ್ಜಿ ಸಲ್ಲಿಸಿದ ಬಳಿಕ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ಫಾರ್ಮ್ ಅನ್ನು ಫೈನಲ್ ಲಾಕ್ ಮಾಡಬೇಕು. ಯಾವುದೇ ತಪ್ಪು ಕಂಡುಬಂದಲ್ಲಿ ಅರ್ಜಿ ನಿರಾಕರಿಸಲಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಪ್ರಮುಖ ದಿನಾಂಕಗಳು (Important Dates)

DRDO RAC Scientist B Recruitment 2025 ಸಂಬಂಧಿತ ಅಧಿಕೃತ ನೋಟಿಫಿಕೇಶನ್ ಮೇ 21, 2025 ರಂದು ಬಿಡುಗಡೆ ಆಗಿತ್ತು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 20, 2025 ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮೊದಲನೇ ಸೂಚನೆಯ ಪ್ರಕಾರ ಕೊನೆಯ ದಿನಾಂಕ ಜುಲೈ 4, 2025 ಆಗಿದ್ದರೂ, ಅದನ್ನು ವಿಸ್ತರಿಸಿ ಈಗ ಜುಲೈ 18, 2025 ಸಂಜೆ 4 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವವರು ಈ ಕೊನೆಯ ದಿನಾಂಕದೊಳಗೆ ತಮ್ಮ ಎಲ್ಲಾ ವಿವರಗಳನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ ಅರ್ಜಿ ಫಾರ್ಮ್ ಅನ್ನು ಫೈನಲ್ ಲಾಕ್ ಮಾಡಬೇಕು. ವಯೋಮಿತಿಗೆ ಸಂಬಂಧಿಸಿದ ಲೆಕ್ಕಾಚಾರಕ್ಕಾಗಿ ಜುಲೈ 4, 2025 ಅನ್ನು ಆಧಾರ ದಿನಾಂಕವಾಗಿ ಪರಿಗಣಿಸಲಾಗುತ್ತದೆ.

ಮೊದಲನೇ ಸಿಗ್ನಲ್ – ಮಿಸ್ ಮಾಡಬೇಡಿ!

“ಒಬ್ಬನು ಈ ಮಾಹಿತಿಯನ್ನು ತಡವಾಗಿ ನೋಡಿ ಅವಕಾಶ ತಪ್ಪಿದ… ಆದರೆ ನೀವು?”

ನಿಮ್ಮ ಕನಸು Karnataka Government Jobs ಆಗಿರಬಹುದು, ಇಲ್ಲವೇ Central Government Jobs in Karnataka… ಅಥವಾ ಸರಳವಾಗಿ ಒಂದು ಗವರ್ನಮೆಂಟ್ ಜಾಬ್ ಬೇಕೆಂದು ನಿರೀಕ್ಷಿಸುತ್ತಿರಬಹುದು.

Taaja Suddi ನಿಮಗೆ ಪ್ರತಿದಿನ ನೀಡುತ್ತಿದೆ:
✅ ನಿಖರವಾದ ಸರ್ಕಾರಿ ಉದ್ಯೋಗ ಮಾಹಿತಿ
✅ ನಿತ್ಯ ಹೊಸ ಸರ್ಕಾರಿ ಉದ್ಯೋಗಗಳು
✅ ಭರವಸೆಯ Karnataka Central Government Jobs
✅ ನೇರ ಲಿಂಕ್‌ಗಳೊಂದಿಗೆ Central Government Jobs in Karnataka
✅ ಸರಳ ಕನ್ನಡದಲ್ಲಿ Karnataka Government Job Alerts/notifications, Scholarship Updates, karnataka schemes /Yojana Details, Admit cards, etc..

ಕರ್ನಾಟಕದಲ್ಲಿ Government Job ಬೇಕಾದ್ರೆ,ಇದನ್ನ ಮಿಸ್ ಮಾಡ್ಬೇಡಿ! 100% ಉಚಿತ – ನಿಜವಾದ Sarkari Job Updates ಇಲ್ಲೆ ಮೊಟ್ಟ ಮೊದಲು ನೋಟಿಫಿಕೇಟಿನ್ ಸಿಗೋದು.ಈಗಲೇ ನಿಮ್ಮ Government Career ಶುರುಮಾಡಿ:

[Telegram Group ಸೇರಿಕೊಳ್ಳಲು – ಇಲ್ಲಿ ಕ್ಲಿಕ್ ಮಾಡಿ]ಮೊಟ ಮೊದಲು ನೋಟಿಫಿಕೇಟಿನ್ ಸಿಗೋದು ಇಲ್ಲೆ

[WhatsApp group ಸೇರಿಕೊಳ್ಳಲು – ಇಲ್ಲಿ ಕ್ಲಿಕ್ ಮಾಡಿ] – ಮೊಟ ಮೊದಲು ನೋಟಿಫಿಕೇಟಿನ್ ಸಿಗೋದು ಇಲ್ಲೆ

ಕರ್ನಾಟಕ ಸರ್ಕಾರಿ ಉದ್ಯೋಗಗಳ ಮಾಹಿತಿಗಳು ಮೊಟ ಮೊದಲು ನಿಮಗೆ ಸಿಗಲು ಸೇರಿಕೊಳ್ಳಿ,ಈ ಮಾಹಿತಿ ಯಾರಿಗಾದರೂ ಬದುಕು ಬದಲಿಸಬಹುದು.
ಇದನ್ನೇ ಶೇರ್ ಮಾಡಿ – ಯಾರಿಗಾದರೂ ಇದು ಒಂದು ದಿಕ್ಕು ಆಗಬಹುದು.ಸಂದೇಹವಿದ್ದರೆ – ನೇರವಾಗಿ taajasuddiofficial@gmail.com ಗೆ ಈ-ಮೇಲ್ನ ಮೂಲಕ ನಮಗೆ ಮೆಸೇಜ್ ಕಳಿಸಿ.

Taaja Suddi = ನಂಬಿಕೆ + ನಿಖರ ಮಾಹಿತಿ + ನಿಮ್ಮ ಗವರ್ನಮೆಂಟ್ ಜಾಬ್ ಗೆ ದಾರಿ.

ಇದು ಕೇವಲ ಇನ್ನೊಂದು ಪೋಸ್ಟ್ ಅಲ್ಲ – ಇದು ನಿಮ್ಮ ಭವಿಷ್ಯಕ್ಕೆ ದಾರಿ!ಇಂದೇ ಸೇರಿ. ಇಂದೇ ಶೇರ್ ಮಾಡಿ. ನಿಮ್ಮ ಅವಕಾಶ ಈಗ ಬಂದಿದೆ.

ಪ್ರಮುಖ ಲಿಂಕ್ಸ್ (Main Links)

ನೀವು ಇತಿಚಿನ ಬಂಪರ್ ನೇಮಕ್ತಿಗಳಿಗೂ ಅರ್ಜಿ ಹಾಕಬಹುದು

ಪ್ರಶ್ನೆ- ಉತ್ತರ (FAQs)

1. DRDO RAC Scientist B ಹುದ್ದೆಗೆ ಅರ್ಜಿ ಹಾಕಲು ಗೇಟ್ ಅಂಕಗಳು ಕಡ್ಡಾಯವೇ?
ಹೌದು. ಈ ನೇಮಕಾತಿಗೆ ಅರ್ಜಿ ಹಾಕಲು ಅಭ್ಯರ್ಥರು ತಮ್ಮ ಸಂಬಂಧಿತ ವಿಭಾಗದಲ್ಲಿ GATE ಪರೀಕ್ಷೆ ಬರೆದಿರಬೇಕು ಹಾಗೂ ಮಾನ್ಯ ಸ್ಕೋರ್ ಹೊಂದಿರಬೇಕು.

2. ನಾನು B.Sc ಪದವಿ ಪಡೆದಿದ್ದೇನೆ. ನಾನು ಅರ್ಜಿ ಹಾಕಬಹುದೆ?
ಇಲ್ಲ. ಈ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ BE/B.Tech ಅಥವಾ M.Sc (Physics/Chemistry/Mathematics/Psychology only) ವಿದ್ಯಾರ್ಹತೆ ಅಗತ್ಯವಿದೆ.

3. DRDO Scientist B ಹುದ್ದೆಗೆ ನೇಮಕವಾದ ನಂತರ ಎಲ್ಲಿ ಕೆಲಸ ಮಾಡಬೇಕಾಗುತ್ತದೆ?
ಈ ಹುದ್ದೆಗಳ ಕೆಲಸದ ಸ್ಥಳಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಇರುತ್ತದೆ. ಹೆಚ್ಚಿನ ಅವಕಾಶಗಳು Bengaluru, Pune, Delhi, Jodhpur, Chandigarh ಮುಂತಾದ ನಗರದ DRDO labsಗಳಲ್ಲಿ ಇರುತ್ತವೆ.

4. ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 18, 2025 ಸಂಜೆ 4 ಗಂಟೆಯವರೆಗೆ ಆಗಿದೆ.

5. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿದೆಯಾ?
ಇಲ್ಲ. ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.

6. ನಾನು GATE 2023 ಬರೆದಿದ್ದೇನೆ. ಅದನ್ನು ಬಳಸಬಹುದೆ?
ಹೌದು. GATE 2023, 2024 ಅಥವಾ 2025 ಅಂಕಗಳನ್ನು ಈ ನೇಮಕಾತಿಗೆ ಬಳಸಬಹುದಾಗಿದೆ (ಅಧಿಕೃತ ನೋಟಿಫಿಕೇಶನ್ ಪ್ರಕಾರ).

7. DRDO RAC ನಲ್ಲಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳನ್ನು GATE ಅಂಕಗಳ ಆಧಾರದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಆಯ್ಕೆ ಸಂದರ್ಶನ ನಡೆಸಲಾಗುತ್ತದೆ. ಅಂತಿಮ ಆಯ್ಕೆ GATE ಅಂಕಗಳಿಗೆ 80% ಮತ್ತು ಸಂದರ್ಶನಕ್ಕೆ 20% ತೂಕ ನೀಡುವುದರ ಆಧಾರದಲ್ಲಿ ಮಾಡಲಾಗುತ್ತದೆ.

8. DRDO Scientist B ಹುದ್ದೆಗೆ ಸಂಬಳ ಎಷ್ಟು ಸಿಗುತ್ತದೆ?
ಅರ್ಹ ಅಭ್ಯರ್ಥಿಗೆ ಪ್ರಾರಂಭಿಕ ಬ್ಯಾಂಸಿಕ್ ಪೇ ₹56,100/- ಆಗಿದ್ದು, HRA, DA ಸೇರಿ ಒಟ್ಟು ವೇತನ ₹85,000/- ರಿಂದ ₹1,00,000/- ರವರೆಗೆ ಇರಬಹುದು.

9. ಈ ಹುದ್ದೆ ಪರ್ಮನೆಂಟ್ ಆಗಿರುತ್ತದೆಯೇ?
ಹೌದು. DRDO Scientist B ಹುದ್ದೆಗಳು ಸಂಪೂರ್ಣ ಪರ್ಮನೆಂಟ್ ಹಾಗೂ ಕೇಂದ್ರ ಸರ್ಕಾರದ ಗುಂಪು ‘A’ ಪಧವಿ ಉದ್ಯೋಗವಾಗಿದೆ.

10. DRDO RAC ನ ಅಧಿಕೃತ ವೆಬ್‌ಸೈಟ್ ಯಾವುದು?
ಅಧಿಕೃತ ವೆಬ್‌ಸೈಟ್: https://rac.gov.in

Leave a Comment